ನೀಲಿ (ನೀರುಳ್ಳಿ,ಗೊಬ್ರ ನೇರಳೆ)ಇದು ದೊಡ್ಡ ಪ್ರಮಾಣದ ಪರ್ಣಪಾತಿ ಮರ.ಪಶ್ಚಿಮ ಘಟ್ಟ ಕಾಡುಗಳಲ್ಲಿ ಕಂಡುಬರುತ್ತದೆ. ಇದು ಮುಖ್ಯವಾಗಿ ದಕ್ಷಿಣ ಎಷಿಯಾ,ಆಸ್ಟ್ರೇಲಿಯ,ಚೀನಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಪೈಲಾಂಥೇಸಿ () ಕುಟುಂಬಕ್ಕೆ ಸೇರಿದ್ದು,ಬಿಸ್ಚೊಫಿಯ ಜವನಿಕ ( ) ಎಂದು ಸಸ್ಯಶಾಸ್ತ್ರೀಯ ಹೆಸರು. == ಸಸ್ಯದ ಗುಣಲಕ್ಷಣಗಳು == ದೊಡ್ಡ ಹಂದರದ ಹಚ್ಚ ಹಸಿರಿನ ತ್ರಿಪತ್ರಿ ()ಎಲೆಗಳು.ತೊಗಟೆ ಕರಿ ಕಂದು,ನಯವಾಗಿರುತ್ತದೆ.ಎಲೆಗಳು ಉದುರುವ ಮುನ್ನ ಕೆಂಪು ಛಾಯೆಗೆ ತಿರುಗುವುದು.ಸಣ್ಣ ಹೂಗಳು.ದಾರಿವಿ ಕೆಂಪು ಛಾಯೆಯಿಂದ ಕೂಡಿದೆ. == ಉಪಯೋಗಗಳು == ದಾರುವು ಬಾಳಿಕೆಯುತವಾಗಿದೆ.ಗೃಹ ನಿರ್ಮಾಣ,ಆಸರೆ ಕಂಬ ಇತ್ಯಾದಿಗಳಿಗೆ ಉಪಯುಕ್ತ.ನೀರಿನಲ್ಲಿ ಹೆಚ್ಚು ಬಾಳಿಕೆ ಇದೆ.ಎಲೆಗಳು ಗೊಬ್ಬರಕ್ಕೆ ಉಪಯುಕ್ತವಾಗಿದೆ.ಬೇರುಗಳು ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.ಹಣ್ಣಿನಿಂದ ವೈನ್ ತಯಾರಿಸುತ್ತಾರೆ. == ಆಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ